Skip to main content

ವೃತ್ತಿ ನೈಪುಣ್ಯತೆ ಹೆಚ್ಚಿಸಿ ಕೊಳ್ಳುವಲ್ಲಿ ಈ ಸಮಯವನ್ನು ಹೇಗೆ ಉಪಯೋಗಿಸಿಕೊಂಡಿದ್ದೇವೆ ಎಂಬುದರ ಬಗ್ಗೆ ಲೇಖನ.....



ವಿಷಯ :ಗಣಿತ ,  ಶಿಕ್ಷಕರ ಹೆಸರು:Manjunath.N.R
ದತ್ತ ಕಾರ್ಯ -9
ವೃತ್ತಿ ನೈಪುಣ್ಯತೆ ಹೆಚ್ಚಿಸಿ ಕೊಳ್ಳುವಲ್ಲಿ ಈ ಸಮಯವನ್ನು ಹೇಗೆ ಉಪಯೋಗಿಸಿಕೊಂಡಿದ್ದೇವೆ ಎಂಬುದರ ಬಗ್ಗೆ ಲೇಖನ.....
  ಎಲ್ಲಾವೃತ್ತಿಗಳಿಗಿಂತ ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದದ್ದು. ಈ ವೃತ್ತಿಯಲ್ಲಿನ ಪ್ರಾಮಾಣಿಕತೆಯಿಂದ ಮಾತ್ರ ಸದೃಢ ಸಮಾಜ ನಿರ್ಮಾಣ ಆಗುತ್ತದೆ.ಸಮಾಜವು ಶಿಕ್ಷಕರ ಬಗ್ಗೆ ಆಪಾರ ವಾದ ನಿರೀಕ್ಷೆ ಯನ್ನು ಹೊಂದಿದೆ. ಆ ಎಲ್ಲಾನಿರೀಕ್ಷೆ ಗಳನ್ನೂ ಪೂರೈಸುವುದು ಪ್ರತಿಯೊಬ್ಬ ಶಿಕ್ಷಕನ ಆದ್ಯ ಕರ್ತವ್ಯ...ಅವರ ನಿರೀಕ್ಷೆ ಗಳನ್ನೂ ಪೂರೈಸ ಬೇಕಾದಾಗ ಮೊದಲು ನಾವು ನಮ್ಮ ವೃತ್ತಿಯಲ್ಲಿ ನಿಷ್ಠೆಯನ್ನು ಇಟ್ಟುನಮ್ಮ ವೃತ್ತಿ ಪಾವಿತ್ರತೆಯನ್ನುಅರೆದು ಕೆಲಸ ಮಾಡಬೇಕಾಗಿದೆ.ತಂತ್ರಜ್ಞಾನ ಯುಗದಲ್ಲಿ ನಾವು ಜೀವಿಸುತ್ತಿರುವುದರಿಂದ ಹಳೆಯ ಭೋದನಾ ಪದ್ದತಿಯನ್ನು ಬದಲಾಯಿಸಿ ತಂತ್ರಜ್ಞಾನ ಆಧಾರಿತ ಭೋಧನೆ ಯನ್ನು ಮಾಡುವುದನ್ನು ಕಲಿಯುವುದು ತುಂಬಾ ಅವಶ್ಯಕವಾಗಿದೆ.ಶಿಕ್ಷಕ ನಿರಂತರ ವಿಧ್ಯಾರ್ಥಿ ಯಾಗಿರ ಬೇಕಾಗಿರುತ್ತದೆ.ದೀಪವು ತ್ತನು ಉರಿದರೆ ಮಾತ್ರ ಬೇರೆಯವರಿಗೆ ಬೆಳಕು ನೀಡುವ ಹಾಗೆ ಶಿಕ್ಷಕ ತಾನು ಕಲಿತರೆ ಮಾತ್ರ ತನ್ನ ವಿಧ್ಯಾರ್ಥಿ ಗಳಿಗೆ ಕಲಿಸಲು ಸಾಧ್ಯ.ಬದಲಾಗುತ್ತಿರುವ ಸಮಾಜದಲ್ಲಿ ಶಿಕ್ಷಕನು ಪ್ರತಿ ದಿನ ತನ್ನನ್ನುತಾನು ನವೀಕರಿಸಿ ಕೊಳ್ಳುವುದು ಅವಶ್ಯಕವಾಗಿದೆ. ನಮ್ಮ ವೃತ್ತ್ತಿ ಯಲ್ಲಿ ನೈಪುಣ್ಯತೆ ಯನ್ನು ಗಳಿಸಿ ಕೊಂಡರೆ ಮಾತ್ರ ಸಮಾಜ ನಮ್ಮನ್ನು ಗೌರವಿಸುತ್ತದೆ.ಈ ಕೋವಿಡ19 ನಂತಹ ವಿಷಮ ಪರಿಸ್ಥಿತಿ ಯಲ್ಲಿಸರ್ಕಾರ ಶಾಲೆ ಗಳಿಗೆ ರಜೆ ಘೋಷಿಸಿದೆ.ಈ  ಸಮಯ ವನ್ನು ನಾನು ವ್ಯರ್ಥ ಮಾಡದೆ ವೃತ್ತಿ ನೈಪುಣ್ಯತೆ ಯನ್ನು ಹೆಚ್ಚಿಸಿಕೊಳ್ಳುವಲ್ಲಿ ಪ್ರಾಮಾಣಿಕ ವಾಗಿ ಪ್ರಯತ್ನಿಸಿದ್ದೇನೆ.ಅವುಗಳೆಂದರೆ.....
v ನನ್ನ ವಿಷಯಕ್ಕೆ ಸಂಬಂಧಿಸಿದ ಹಾಗು ಕಥೆ , ಕಾದಂಬರಿ ಪುಸ್ತಕ ಗಳನ್ನುಓದಿ ನನ್ನ ಜ್ಞಾನವನ್ನುಹೆಚ್ಚಿಸಿ ಕೊಂಡಿದ್ದೇನೆ.
v ಕಲಬುರ್ಗಿ WEBINAR ತಂಡದವರು ನಡೆಸಿ ಕೊಟ್ಟಂತಹ GOOGLE MEET ನ ಸಹಾಯದಿಂದ ತರಗತಿ ಕೋಣೆಯಲ್ಲಿ ತಂತ್ರಜ್ಞಾನದ ಬಳಕೆ ಬಗ್ಗೆ ತಿಳಿದು ಕೊಂಡಿದ್ದೇನೆ.
v YOUTUBE ನಲ್ಲಿ ಕಲಿಕೋಪಕರಣಗಳನ್ನು ತಯಾರಿಸುವ ವಿಧಾನ ಗಳನ್ನು ಕಲಿತಿದ್ದೇನೆ.
v KINEMASTER ಸಹಾಯದಿಂದ VIDEO ಗಳನ್ನು ರಚಿಸುವುದು ಹಾಗು VIDEO ಗಳನ್ನು EDIT ಮಾಡುವುದು ಹೇಗೆ ಎಂಬುದನ್ನು ತಿಳಿದು ಕೊಂಡಿದ್ದೇನೆ.
v ಗಣಿತಕ್ಕೆ ಅತೀ ಉಪಯುಕ್ತವಾದ ಸಾಧನವಾದ  GEOGEBRA ದ ಬಗ್ಗೆ ಸ್ವಲ್ಪ ಮಾಹಿತಿಯನ್ನು ಪಡೆದಿದ್ದೇನೆ.
v POWER POINT PRESENTATION ಮೂಲಕ ತರಗತಿ ಗಳನ್ನುಹೇಗೆ ನಡೆಸಬಹುದೆಂದು ತಿಳಿದು ಕೊಂಡಿದ್ದೇನೆ.
v H5P ಮತ್ತು GOOGLEFORM ಗಳ ಸಹಾಯದಿಂದ QUIZ PROGRAMME ನ್ನುಹೇಗೆ ಅಚ್ಚುಕಟ್ಟಾಗಿ ನಡೆಸ ಬಹುದೆಂದು ತಿಳಿದು ಕೊಂಡಿದ್ದೇನೆ.
v ವೃತ್ತಿ ಸಹೋದ್ಯೋಗಿಗಳಿಗೆ ಕರೆ ಮಾಡಿ ಕ್ಲಿಷ್ಟ ವಿಷಯಗಳ ಬಗ್ಗೆ ಚರ್ಚೆ ನಡೆಸಿ ಸಮಸ್ಯೆ ಪರಿಹರಿಸಿಕೊಂಡಿದ್ದೇನೆ.
v ಘಟಕ ಯೋಜನೆ , ಸೇತುಬಂದ ಮುಂತಾದ ಕಾರ್ಯಗಳನ್ನು ಈ ರಜೆ ಅವಧಿಯಲ್ಲೇ ಮುಗಿಸಿ ಮುಂದಿನ ಶೈಕ್ಷಣಿಕ ವರ್ಷಕ್ಕೆ ಯೋಜನೆ ಸಿದ್ದ ಪಡಿಸಿಕೊಂಡಿದ್ದೇನೆ.
v ಮುಂದಿನ ಶೈಕ್ಷಣಿಕ ವರ್ಷಕ್ಕೆ ಅನುಕೂಲ ವಾಗುವಂತಹ ರಸ ಪ್ರಶ್ನೆ ಗಳನ್ನು ತಯಾರಿಸಿ ಕೊಂಡಿದ್ದೇನೆ.
v ಅಂತರ್ಜಾಲದಲ್ಲಿ ಪಾಠ ಕ್ಕೆ ಸಂಬಂಧಿಸಿದ VIDEO ಗಳನ್ನೂ ವೀಕ್ಷಿಸಿ ವಿಧ್ಯಾರ್ಥಿ ಗಳಿಗೆ EASYMETHOD ಲಿ ಹೇಗೆ ಅರ್ಥ ಮಾಡಿಸಬಹುದೆಂದು ತಿಳಿದು ಕೊಂಡಿದ್ದೇನೆ.
ಒಟ್ಟಾರೆ ಯಾಗಿ ಈ ರಜೆ ಅವಧಿ ನನಗೆ ಹೊಸ ಹೊಸ ವಿಷಯಗಳನ್ನು ಕಲಿತು ನನ್ನ ವಿಷಯ ಸಂಪದೀಕರಣ ಮಾಡಿಕೊಳ್ಳಲು ಹಾಗು ತಂತ್ರಜ್ಞಾನ ಆಧಾರಿತ ಭೋಧನೆ, ಮೌಲ್ಯ ಮಾಪನ ವನ್ನು ಕೈಗೊಳ್ಳಲುನನಗೆ ತುಂಬಾ ಸಹಾಯಕವಾಗಿದೆ.ಹೀಗೆ ನನ್ನ ಕಲಿಕೆ ಮುಂದುವರೆಸಿ ನನ್ನ ವೃತ್ತಿಗೆ ,ಈ ಸಮಾಜಕ್ಕೆ ಹಾಗು ನನ್ನ ವಿಧ್ಯಾರ್ಥಿ ಗಳಿಗೆ ನ್ಯಾಯವನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮುಂದುವರೆಸುತ್ತೇನೆ ಎಂದು ಹೇಳಲು ಇಷ್ಟ ಪಡುತ್ತೇನೆ.

Comments

Popular posts from this blog

Author: Satish Kaneri Published on: 27-07-2020 ಘಟಕ ಯೋಜನೆ 3rd Standard

Author: Satish Kaneri Published on: 27-07-2020 ಘಟಕ ಯೋಜನೆ 3rd Standard 

shashikanth kodli