Skip to main content

ಕೋವಿಡ 19 ರ ಈ ಸಮಯದಲ್ಲಿ ಕಲಿಕೆ ಪ್ರಕ್ರಿಯೆಯಲ್ಲಿ ಸದಾ ತೊಡಗಿ ಕೊಳ್ಳುವಂತೆ ಮಾಡಲು ನಮ್ಮ ಸಲಹೆ ಮತ್ತು ಸೂಚನೆ ಗಳು... Manjunath.N.R



ವಿಷಯ :ಗಣಿತ ,  ಶಿಕ್ಷಕರ ಹೆಸರು:Manjunath.N.R
ದತ್ತ ಕಾರ್ಯ -10
ಕೋವಿಡ 19 ರ ಈ ಸಮಯದಲ್ಲಿ ಕಲಿಕೆ ಪ್ರಕ್ರಿಯೆಯಲ್ಲಿ ಸದಾ ತೊಡಗಿ ಕೊಳ್ಳುವಂತೆ ಮಾಡಲು ನಮ್ಮ ಸಲಹೆ ಮತ್ತು ಸೂಚನೆ ಗಳು...
           ಕೋವಿಡ 19 ಎಂಬುದು ಒಂದು ಮಾರಕ ವೈರಸ್ ಆಗಿದ್ದು ಇಡಿ ಪ್ರಪಂಚವನ್ನೇ ತಲ್ಲಣ ಗೊಳಿಸಿದೆ.ಜಗತ್ತಿನ ಎಲ್ಲ ಕ್ಷೇತ್ರಗಳನ್ನು ದಿಕ್ಕು ತಪ್ಪುವಂತೆ ಮಾಡಿ ತನ್ನ ವಿಶ್ವ ರೂಪವನ್ನು ಮನುಕುಲಕ್ಕೆ ಪರಿಚಯಿಸಿದೆ.ಇದರಿಂದ ನಮ್ಮ ಶಿಕ್ಷಣ ಕ್ಷೇತ್ರವೂ ಸಹ ಹೊರತಾಗಿಲ್ಲ .ಇಂತಹ ಸಂದರ್ಭದಲ್ಲಿಸುಮಾರು ತಿಂಗಳುಗಳ ಕಾಲ ವಿಧ್ಯಾರ್ಥಿಗಳು ಶಾಲೆಗಳಿಂದ ಹೊರಗಿದ್ದಾರೆ.ಈ ಸಂದರ್ಭದಲ್ಲಿ ಶಾಲೆಯನ್ನು ತೆರೆಯುವುದು ಸಹ ಕಷ್ಟ ಸಾಧ್ಯವಾಗಿದೆ. ಆದರೆ ಹೀಗೆ ಆದರೆ ಮಕ್ಕಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಇದಕ್ಕಾಗಿ ಸರ್ಕಾರ ಮಕ್ಕಳನ್ನುಕಲಿಕೆಯಲ್ಲಿ ನಿರಂತರವಾಗಿ ತೊಡಗಿಸಲು ಹಲವು ಯೋಜನೆ ಗಳನ್ನು ಹೀಗಾಗಲೇ ತೆಗೆದು ಕೊಂಡಿದೆ.ಹಾಗೆಯೇ ಇದನ್ನು ಇನ್ನೂ ಪರಿಣಾಮಕಾರಿಯಾಗಿ ಮಾಡಲು ನನ್ನ ಕೆಲವು ಸಲಹೆಗಳು ಈ ಕೆಳಗಿನಂತಿವೆ.
v DD ಚಂದನ ವಾಹಿನಿಯಲ್ಲಿ ಪ್ರಸಾರ ವಾಗುತ್ತಿರುವ ಪಾಠಗಳು ದಿನದಲ್ಲಿ 2 ರಿಂದ 3 ಬಾರಿ ಮರು ಪ್ರಸಾರ ವಾದರೆ ಉತ್ತಮ ಎನಿಸುತ್ತದೆ .ಏಕೆಂದರೆ ಗ್ರಾಮೀಣ ಭಾಗದಲ್ಲಿ(ಅದರಲ್ಲೂ ಮಳೆಗಾಲದಲ್ಲಿ ) ವಿದ್ಯುತ್ ಸಮಸ್ಯೆ ಎದುರಾಗುವುದರಿಂದ ಒಂದೇ ಬಾರಿ ಪ್ರಸಾರ ಮಾಡಿದಾಗ ಹಲವು ವಿಧ್ಯಾರ್ಥಿಗಳು ವಂಚಿತ ರಾಗುತ್ತಾರೆ.
v  ಪಾಲಕರಿಗೆ ಹರಿವು ಮೂಡಿಸುವುದರ ಮೂಲಕ ಚಂದನ ಟಿವಿಯಲ್ಲಿ ಪ್ರಸಾರ ವಾಗುವ ತರಗತಿ ಗಳನ್ನೂ ತಪ್ಪದೆ ವೀಕ್ಷಿಸಲು ಕ್ರಮ ವಹಿಸುವಂತೆ sdmc ಹಾಗು ಮುಖ್ಯ ಶಿಕ್ಷಕರು ತಿಳಿಸುವುದು.
v ವಠಾರ ಶಾಲೆಗಳನ್ನು ಪ್ರಾರಂಭಿಸುವುದು.
v ಹಳೆಯ ವಿಧ್ಯಾರ್ಥಿ ಗಳ ಸಹಾಯದಿಂದ ಮಕ್ಕಳಿಗೆ ಪಾಠ ಭೋದನೆ ಮಾಡಿಸುವುದು.
v ಪುಸ್ತಕ ಗಳನ್ನೂ ಮಕ್ಕಳಿಗೆ ವಿತರಿಸಿ ಸ್ವಯಂ ಕಲಿಕೆ ಯಲ್ಲಿ ತೊಡಗುವಂತೆ ಮಾಡುವುದು.
v smartphone ಇರುವ ವಿಧ್ಯಾರ್ಥಿ ಗಳ  ತರಗತಿ ವಾರು whatsup ಗ್ರೂಪ್ ಮಾಡಿ ವಿಷಯ ಶಿಕ್ಷಕರು ಅದರಲ್ಲಿ ಮಾಹಿತಿ ಹಂಚಿಕೊಳ್ಳುವಂತೆ ಮಾಡುವುದು.
v ಸದರಿ ಮಾಹಿತಿಯನ್ನು ಎಲ್ಲ ವಿಧ್ಯಾರ್ಥಿಗಳಿಗೆ ರವಾನಿಸುವಂತೆ ಗುಂಪುಗಳನ್ನು ರಚಿಸಿ ಕ್ರಮ ಕೈಗೊಳ್ಳುವುದು.
v smart phone ಇರುವ ವಿಧ್ಯಾರ್ಥಿ ಗಳಿಗೆ google meet app ಅಥವಾ microsoft teams app ನ ಸಹಾಯದಿಂದ online ತರಗತಿ ಗಳನ್ನೂ ನಡೆಸಿ ಸಾಧ್ಯವಾದಷ್ಟು ವಿಧ್ಯಾರ್ಥಿಗಳು ಭಾಗವಹಿಸುವಂತೆ ನೋಡಿಕೊಳ್ಳುವುದು.
v ವಾರದಲ್ಲಿ ಒಂದು ದಿನ ಒಬ್ಬ ಶಿಕ್ಷಕರು ಮನೆ ಮನೆ ಭೇಟಿ ನೀಡಿ ಮೇಲ್ವಿಚಾರಣೆ ನಡೆಸುವುದು.
v  smart phone ಇರುವ ವಿಧ್ಯಾರ್ಥಿಗಳಿಗೆ youtube channelಗಳಾದ khan academy,meghashaala,epaathashaala,deeksha portal ಗಳಲ್ಲಿ ಬರುವ ಎಲ್ಲ ಪಾಠಗಳನ್ನೂ ತಿಳಿಯಲು ಹೇಳುವುದು.
v online crashcourse ಗಳನ್ನೂ ಎದುರಿಸಲು ತಿಳಿಸುವುದು.
v ಹಳೆಯ ಪ್ರಶ್ನೆ ಪತ್ರಿಕೆಗಳನ್ನು ನೋಡಿ ಪರಿಹಾರ ಕಂಡು ಕೊಳ್ಳಲು ತಿಳಿಸುವುದು.
v ವಿಧ್ಯಾರ್ಥಿಗಳು ತಮ್ಮ ಸಮವಯಸ್ಕರ ಜೊತೆ ಪಾಠಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಸಲು ತಿಳಿಸುವುದು.
v ವಿಧ್ಯಾರ್ಥಿಗಳೇ quiz ಪ್ರಶ್ನೆ  ಗಳನ್ನೂ ತಯಾರಿಸಿ ತಮ್ಮ ತಮ್ಮಲ್ಲೇ ಗುಂಪು ರಚಿಸಿ ವಿನಿಮಯ ಮ್ಮಾಡಿ ಕೊಳ್ಳಲು ತಿಳಿಸುವುದು.
ಮೇಲಿನ ಎಲ್ಲಾ ಅಂಶಗಳು ನನ್ನ ವೈಯಕ್ತಿಕ ಅಭಿಪ್ರಾಯಗಳಾಗಿವೆ,ಮೇಲಿನ ಎಲ್ಲ ಅಂಶಗಳನ್ನು ಅನುಸರಿಸುವುದರಿಂದ ಕಲಿಕೆಯಲ್ಲಿ ಮಕ್ಕಳನ್ನು ನಿರಂತರವಾಗಿ ತೊಡಗಿಕೊಳ್ಳುವಂತೆ ಮಾಡಬಹುದುಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ.


Comments

Popular posts from this blog

Author: Satish Kaneri Published on: 27-07-2020 ಘಟಕ ಯೋಜನೆ 3rd Standard

Author: Satish Kaneri Published on: 27-07-2020 ಘಟಕ ಯೋಜನೆ 3rd Standard 

shashikanth kodli